ಇಪ್ಪತ್ತೈದು ವರ್ಷಗಳು ಕಳೆದರೂ ಪಕ್ಕಾ ರಸ್ತೆ ಕಾಣದ ಚಿಂಚಲಿ ಪಟ್ಟಣದ ಬಾದಾಮಿ ಕೋಡಿ ಜನವಸತಿ

Aug 4, 2023 - 18:03
Aug 4, 2023 - 18:04
 0  621

ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಬಾದಾಮಿ ಕೋಡಿಯ ಜನತೆ ಜೀವನ ಸುಮಾರು ಎಪ್ಪತ್ತೈದು ವರ್ಷಗಳು ಕಳೆದರೂ ರಸ್ತೆ ಕಾಣದಾಗಿದೆ. 

ಈ ಪ್ರದೇಶದಲ್ಲಿ ನೂರಾ‌ ಇಪ್ಪತ್ತು ಕುಟುಂಬಗಳು ವಾಸವಾಗಿದ್ದು, ಸುಮಾರು 450ಕ್ಕಿಂತಲೂ ಹೆಚ್ಚು ಜನರು ವಾಸವಾಗಿದ್ದಾರೆ. ಇವರ ಮಕ್ಕಳು ಶಾಲೆಗೆ ಹೋಗಬೇಕಾದರೆ ಇದೇ ದಾರಿ ಗತಿ, ಚಿಂಚಲಿ ಪಟ್ಟಣಕ್ಕೆ ಹೋಗಬೇಕಾದರೂ ಇದೊಂದೇ ರಸ್ತೆಯನ್ನು ಅವಲಂಬಿಸಿದ್ದಾರೆ ರಸ್ತೆಗಾಗಿ 12 ಅಡಿ ಜಾಗ ಇದ್ದರೂ ರಸ್ತೆ ಇರುವುದು 7-8ಅಡಿ ಮಾತ್ರ ಈ ರಸ್ತೆಯಿಂದ ಮೂರು ಶಾಲಾ ಬಸ್ಸುಗಳು ಹಾಯ್ದು ಹೋಗುತ್ತವೆ ಬಸ್ಸು ಹೊರಟರೆ ಯಾರಾದರೂ ದ್ವಿಚಕ್ರ ವಾಹನ ಬಿಡಿ ನಡೆದುಕೊಂಡು ಹೋಗಲು ಜಾಗವಿಲ್ಲದಷ್ಟು ಕಷ್ಟಕರ ಜೀವನ ಇವರದ್ದಾಗಿದೆ ಕಳೆದ ಹತ್ತು ದಿನಗಳಿಂದ ಜಿಟಿ ಜಿಟಿ ಮಳೆಯಿಂದಾಗಿ ಈ ರಸ್ತೆಯಿಂದ ಹೋಗಬೇಕಾದರೆ ಎಲ್ಲಿ ಜಾರಿ ಬೀಳುವರೋ ಎಂಬಂತೆ ಆತಂಕದಲ್ಲಿ ಹೋಗುವ ಅನಿವಾರ್ಯತೆ ಇದೆ ಇನ್ನು ರಾತ್ರಿ ಹೊತ್ತಿನಲ್ಲಿ ಏನಾದರು ಆರೋಗ್ಯ ಸಮಸ್ಯೆ ಆದರೆ ಅವರ ಪಾಡು ಕೇಳತೀರದು ರೈತರು, ವೃದ್ದರು, ಮಕ್ಕಳು ಪಟ್ಟಣಕ್ಕೆ ಹೋಗಬೇಕಾದರೆ ಈ ಗುಂಡಿಗಳ ರಸ್ತೆನೆಗತಿ, 

ಇತ್ತ ಪಟ್ಟಣ ಪಂಚಾಯತ್ ಸದಸ್ಯರು, ಶಾಸಕರು ಜನಪ್ರತಿನಿಧಿಗಳು ಬರುವುದು ಓಟು ಕೆಳುವುದಕ್ಕೆ ಮಾತ್ರ,

ಮೂರು ಬಾರಿ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶಾಸಕ ದುರ್ಯೋಧನ ಐಹೊಳೆ ಕಳೆದ ನಾಲ್ಕನೆ ಬಾರಿಗೆ ವಿಧಾನಸಭಾ ಚುನಾವಣೆ ಮುಂಚೆ ಆಮೀಶ ಎಂಬಂತೆ ಈ ರಸ್ತೆ ಕಾಮಗಾರಿಗೆ ಪೂಜೆ ಮಾಡಿ ಹೋಗಿ ಆರು ತಿಂಗಳುಗಳೇ ಗತಿಸಿದರೂ ಇತ್ತ ಕಡೆ ಗಮನವು ಹರಿಸಿಲ್ಲ ಒಂದು ಡಬ್ಬಿ ಗರಚು ಕೂಡ ಹಾಕಲಿಲ್ಲ.

ಇನ್ನಾದರೂ ಜನಪ್ರತಿನಿಧಿ ಶಾಸಕರು ಅಧಿಕಾರಿಗಳು ಎಚ್ಚೆತ್ತುಕೊಂಡು ಬಡಕುಟುಂಬಗಳೇ ವಾಸಮಾಡುವ ಈ ಗುಂಡಿಗಳೇ ತುಂಬಿದ ರಸ್ತೆಯ ಕಾಮಗಾರಿ ಪ್ರಾರಂಭಿಸಿ ಪಕ್ಕಾ ರಸ್ತೆ ಮಾಡುವ ಮೂಲಕ ಶಾಲಾ ಮಕ್ಕಳು, ರೈತರು, ವೃದ್ಧರಿಗೆ ಕಾಯಕಲ್ಪವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

What's Your Reaction?

like

dislike

love

funny

angry

sad

wow