ಹಲವು ವರ್ಷಗಳಿಂದ ತಲೆ ಎತ್ತಿ ನಿಂತಿರುವ ನಿಷ್ಪ್ರಯೋಜಕ ಕಟ್ಟಡಗಳು!

Dec 10, 2023 - 11:14
Dec 10, 2023 - 11:15
 0  648

ರಾಯಬಾಗ, (rni) ಕಳೆದ ಹತ್ತು ವರ್ಷಗಳಿಂದ ಯಾವುದೇ ಪ್ರಯೋಜನವಿಲ್ಲದೆ ಗಬ್ಬೆದ್ದು ನಾರುತ್ತಿರುವ ಸರಕಾರಿ ಕಟ್ಟಡಗಳು ಮಲಮೂತ್ರ ವಿಸರ್ಜನೆಯ ಕೇಂದ್ರ ಸ್ಥಾನಗಳಾಗಿ ಮಾರ್ಪಟ್ಟಿವೆ. 

ಎಸ್ ....ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸುಮಾರು 25 ವರ್ಷಗಳ ಹಿಂದೆ ಆರೋಗ್ಯ ಇಲಾಖೆಯ ವತಿಯಿಂದ ನಿರ್ಮಾಣವಾಗಿರುವ ಆರೋಗ್ಯ ಉಪ ಕೇಂದ್ರ ಕಳೆದ 15ವರ್ಷಳಿಂದ ಮಲ ಮೂತ್ರಗಳಿಂದ ಗಬ್ಬೆದ್ದು ನಾರುತ್ತಿದೆ. ಉಪ ಕೇಂದ್ರದ ಒಳಗಿದ್ದ ಎಲ್ಲ ದಾಖಲಾತಿಗಳು ಸುಟ್ಟು ಕರಕಲಾಗಿ ಹೋಗಿವೆ. 

ಇನ್ನು ಇದರ ಪಕ್ಕದಲ್ಲಿಯೇ ಇರುವ ಇಪ್ಪತ್ತು ಪೈಸೆ ಆಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಕೂಡ ಕೆಳದ 25 ವರ್ಷಗಳಿಂದ ಅನಾಥವಾಗಿ ನಿಂತಿದೆ ಕಟ್ಟಡದ ನೆತ್ತಿಯ ಮೇಲೆ ಆಲದ ಮರ ಬೆಳೆದು ನಿಂತಿದೆ. ಹೇಳಲಾರದಷ್ಟು ಗಲೀಜ್ ನಿರ್ಮಾಣವಾಗಿದೆ. 

ಇವೆರಡರ ಕಥೆ ಹೀಗಾದರೆ ಆರೋಗ್ಯ ಉಪ ಕೇಂದ್ರದ ಹಿಂಭಾಗದಲ್ಲಿರುವ ಬಿ ಎಸ್ ಎನ್ ಎಲ್ ದೂರವಾಣಿ ಕೇಂದ್ರ ವು ಕೂಡ ಬಿಕೋ ಎನ್ನುತ್ತಿದೆ. ದೂರವಾಣಿ ಕೇಂದ್ರದ ಒಳಗಡೆ ಕೆಲವು ಮಷೀನ್ ಗಳು ಪ್ರಯೋಜನೆ ಇಲ್ಲದೆ ಸದ್ದು ಮಾಡುತ್ತಿವೆ. ಬಿ ಎಸ್ ಎನ್ ಎಲ್ ಸಂಸ್ಥೆ ಖಾಸಗೀಕರಣವಾದಾಗಿನಿಂದ ಧೂಳು ಹಿಡಿದು ನಿಂತಿದೆ.

ಇನ್ನೂ ಕೇಂದ್ರ ಶಾಲೆಯ ಪಕ್ಕದಲ್ಲಿಯೇ ಸುಮಾರು 15 ವರ್ಷಗಳಿಂದ ದೈತ್ಯಾಕಾರದಲ್ಲಿ ತಲೆ ಎತ್ತಿ ನಿಂತಿರುವ ಶಿಕ್ಷಕರ ವಸತಿ ಗ್ರಹದ ಕಥೆ ಹೇಳೋದೆ ಬೇಡ. ನಿರ್ಮಾಣವಾದಾಗಿನಿಂಲೂ ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದ್ದ ಈ ಕಟ್ಟಡವಿಂದು ಮಲಮೂತ್ರ ವಿಸರ್ಜನೆಯ ಶೌಚಾಲಯವಾಗಿ ಪರಿಣಮಿಸಿದೆ. 8 ಜನ ಶಿಕ್ಷಕರ ಕುಟುಂಬ ವಾಸಾಗಿರಬೇಕಿದ್ದ ಈ ಕಟ್ಟಡದ ಕಥೆ ನಿಗೂಢವಾಗಿದೆ. ಈ ಕಟ್ಟಡ ಅಪೂರ್ಣವಾಗಿದ್ದೇಕೆ?, ಕೇಂದ್ರ ಶಾಲೆಯ ಸಿಬ್ಬಂದಿ ಈ ಕಟ್ಟಡವನ್ನು ಹ್ಯಾಂಡ್ ಓವರ್ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿರುವುದೇಕ? ಎನ್ನುವುದು ಯಕ್ಷಪ್ರಶ್ನೆಯಾಗಿದೆ.

What's Your Reaction?

like

dislike

love

funny

angry

sad

wow