ಅಂಗನವಾಡಿಗಳಿಗೆ ಆಹಾರ ಧಾನ್ಯ ನೇರ ಸರಬರಾಜು ಮಾಡಿ: ಸಂತೋಷ ಕಾಂಬಳೆ

Dec 10, 2023 - 11:18
Dec 10, 2023 - 11:19
 0  243

ರಾಯಬಾಗ, (RNI) ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ 29 ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪದ ಹಿನ್ನಲೆಯಲ್ಲಿ ರಾಯಬಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಸಂತೋಷ ಕಾಂಬಳೆ ಮುಗಳಖೋಡ ಪಟ್ಟಣದ ಅಂಗನವಾಡಿ ಸಂಖ್ಯೆ 3ಕ್ಕೆ ಇಂದು ಭೇಟಿ ನೀಡಿದರು.

ಸಾರ್ವಜನಿಕ ಸಮಸ್ಯೆಗಳನ್ನು ಆಲೀಸಿದ ಅಧಿಕಾರಿ, ಮುಗಳಖೋಡ ಪಟ್ಟಣದ 29 ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಸಮಯಕ್ಕೆ ಆಹಾರ ವಿತರಣೆ ಮಾಡಬೇಕು, ಇಲಾಖೆಯಿಂದ ಸರಬರಾಜು ಆಗುವ ಆಹಾರ ಧಾನ್ಯವನ್ನು ಆಯಾ ಅಂಗನವಾಡಿಗಳಲ್ಲಿಯೇ ಸಂಗ್ರಹಣೆ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಳೆದ ಒಂದುವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಸಂಖ್ಯೆ 3 ಮತ್ತು 6 ರಲ್ಲಿ ಅಂಗನವಾಡಿಯ ಸಹಾಯಕಿಯರ ಹುದ್ದೆಗೆಯನ್ನು ಒಂದು ವಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ಪುರಸಭೆ ಸದಸ್ಯ ರಾಜಶೇಖರ ನಾಯಿಕ, ಸುಮಾರು ತಿಂಗಳಿನಿಂದ ವಾರ್ಡ್ ಸಂಖ್ಯೆ 3 ರ ಎರಡು ಅಂಗನವಾಡಿಗಳಲ್ಲಿ ಅನೇಕ ಸಮಸ್ಯೆಗಳಿ ಇವತ್ತು ರಾಯಬಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಒಂದು ವಾರದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದು ಆಗದೇ ಹೋದರೆ ನಾವೇ ಖುದ್ದಾಗಿ ಹೋರಾಟಕ್ಕಿಳಿಯುತ್ತೇವೆ ಎಂದರು.,

ಈ ಸಂದರ್ಭದಲ್ಲಿ ರಾಯಬಾಗ ಶಿಶು ಅಭಿವೃದ್ಧಿ ಅಧಿಕಾರಿ ಸಂತೋಷ ಕಾಂಬಳೆ, ಪುರಸಭೆ ಸದಸ್ಯ ರಾಜಶೇಖರ ನಾಯಿಕ, ಮುಗಳಖೋಡ ಪಟ್ಟಣದ ಅಂಗನವಾಡಿ ಮೇಲ್ವೀಚಾರಕಿ, ಎಂ ಎಂ ಸೂರ್ಯವಂಶಿ, ಮುಖಂಡರಾದ ರಾಣಪ್ಪ ಹಾದಿಮನಿ, ಮಾರುತಿ ಕೆಳಗಡೆ, ರಾಜು ಗಸ್ತಿ, ಫೀರಪ್ಪ ಮಾದರ, ಸಂತೋಷ ಪೂಜೇರಿ, ನ್ಯಾಮವ್ವ ಕೆಳಗಡೆ, ಸೋಣವ್ವ ಐಹೊಳೆ ಇತರರು ಇದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow

211
211