ರಾಯಬಾಗ ತಹಸೀಲ್ದಾರ್ ಸುರೇಶ್ ಮುಂಜೆ ನಡೆಯಿಂದ ಆಕ್ರೋಶಗೊಂಡ ಪಾಲಬಾವಿ ಗ್ರಾಮದ ದಲಿತ ಸಮುದಾಯ

ಕಳೆದ ಎರಡು ತಿಂಗಳಿಂದ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಎಂದು ಹಾರಿಕೆ ನೀಡುತ್ತ, ಗ್ರಾಮಸ್ಥರ ಹಾಗೂ  ದಲಿತರ ಮಾತನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ ಸುರೇಶ ಮುಂಜೆ: ಕುಮಾರ ತೆಳಗಡೆ ಆಕ್ರೋಶ .

Dec 16, 2023 - 20:42
Dec 16, 2023 - 20:43
 0  459

ರಾಯಬಾಗ, (आरएनआई) ರಾಯಬಾಗ ತಾಲೂಕು ಪೂರ್ವ ಭಾಗದ ಕಡೆ ಗ್ರಾಮವೇ ಪಾಲಬಾವಿ. ಕಳೆದ  ನಾಲ್ಕು ದಶಕಗಳಿಂದ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಭೂಮಿಯ ಸರ್ವೆ ಮಾಡುವ ಕೆಲಸವು ನೆನೆಗುದ್ದಿಗೆ ಬಿದ್ದಿರುವ ಕಾರಣ ತಹಶೀಲ್ದಾರ್ ಸಮ್ಮುಖದಲ್ಲಿ ಸರ್ವೇ ಕಾರ್ಯ ಮಾಡಿಸಿ ಸಾರ್ವಜನಿಕರು ಹಾಗೂ ದಲಿತ ಸಮುದಾಯವು ಹಾಗೂ ವಾರ್ಡ್ ನಿವಾಸಿಗಳು ತಹಶೀಲ್ದಾರರಲ್ಲಿ ಮನವಿ ಮಾಡುತ್ತಾ ಬಂದಿರುತ್ತಾರೆ.

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಸಮ್ಮೇಖದಲ್ಲಿ ತಹಸಿಲ್ದಾರ್ ಸುರೇಶ ಮುಂಜೆ ಅವರಿಗೆ ರಾಯಬಾಗ್ ಪಿಡಬ್ಲ್ಯೂಡಿ ಆಫೀಸ್ ಲ್ಲಿ ಶಾಸಕ ಮಹೇಂದ್ರ ತಮ್ಮಣ್ಣನವರ ತಹಶೀಲ್ದಾರ್ ಅವರಿಗೆ ಆದೇಶ ಮಾಡಿದ್ದು ತಾವು ಪಾಲಬಾವಿ ಗ್ರಾಮಕ್ಕೆ ಬೆಟ್ಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಸಲಹೆ ನೀಡಿದ್ದರೂ, ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದರಗಿ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಗ್ರಾಮದ ವಾರ್ಡ್ ನಂಬರ್ 3ರ ಸಾರ್ವಜನಿಕರ ಹಾಗೂ ದಲಿತ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಲಬಾವಿ ಗ್ರಾಮದ ಸರ್ವೆ ನಂಬರ್ 227/2ರಲ್ಲಿ  01 ಎಕರೆ 09 ಗುಂಟೆ ಜಮೀನು  ಬಿಡಿಒ ರಾಯಬಾಗ ಅವರ ಹೆಸರಿನಲ್ಲಿದ್ದು ಹಾಗೂ 228/ 1+2ಎ   01 ಎಕರೆ 38 ಗಂಟೆಯ ಮಂಡಲ ಪಂಚಾಯತ ಹಂದಿಗುಂದ ಹೆಸರಿನಲ್ಲಿದ್ದು ಅದೂ ಕೂಡ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅವರ ಹೆಸರು ಮೇಲೆಯೇ ಇದೆ. ಕಳೆದ 40 ವರ್ಷಗಳ ಹಿಂದೆ ನಮ್ಮ ಪಾಲಬಾವಿ ಗ್ರಾಮದ ಹಿರಿಯರು ದಾನದ ರೂಪದಲ್ಲಿ ಕೊಟ್ಟಿರುವ ಈ ಎರಡು ಕಡೆಯ ಜಮೀನವನ್ನು ಸರ್ವೆ ನಂಬರನಲ್ಲಿಯ ಒಟ್ಟು  03 ಎಕರೆ  07ಗುಂಟೆ ಜಮೀನವು ತಾಲೂಕು ಪಂಚಾಯಿತಿ ಇಲಾಖೆಯ ಹೆಸರಿನಲ್ಲಿ ಇದೇ. ಪಾಲಬಾವಿ ಗ್ರಾಮ ಪಂಚಾಯಿತ್ ಅಧಿಕಾರಿಗಳು ಆದೇಶದಂತೆ, ಚುನಾಯಿತ ಜನಪ್ರತಿನಿಧಿಗಳ ಸಲಹೆಯಂತೆ ಸಾರ್ವಜನಿಕರು ಈ ಎರಡು ಸರ್ವೇದ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

ಆ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುವ ಸಾರ್ವಜನಿಕರಿಗೆ ಹಕ್ಕುಪತ್ರ ನೀಡಿ ಅವರಿಗೆ ನಿಜವಾದ ಬದುಕನ್ನು ಕಲ್ಪಿಸಿ ಕೊಡಬೇಕಾದದ್ದು ಅಧಿಕಾರಿಗಳ ಕೆಲಸವಾಗಿದ್ದು, ಅದಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ, ಸರ್ವೆ ಮಾಡಿಸಿ ನಿಜವಾದ ಫಲಾನುಭವಿಗಳಿಗೆ ಹಕ್ಕಪತ್ರ ಕೊಡುವಂತೆ ಸಾರ್ವಜನಿಕರು ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಆದರೆ ತಾಲೂಕ ದಂಡಾಧಿಕಾರಿಗಳು, ತಹಶೀಲ್ದಾರ್ ಸುರೇಶ್ ಮುಂಜೆ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಸಾರ್ವಜನಿಕರ ಹಾಗೂ ದಲಿತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

"ಪಾಲಬಾವಿ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ತುಂಬಾ ವರ್ಷಗಳಿಂದ ಜನತಾ ಪ್ಲಾಟ್ ಹಾಗೂ ಬರಲಿಂಗೇಶ್ವರ ಕಾಲೋನಿಯ ಜಮೀನ್ ಸರ್ವೆ ಮಾಡಬೇಕೆಂದು ಸಾರ್ವಜನಿಕರ ಬೇಡಿಕೆ ಇದ್ದು,  ತಾಲೂಕು ದಂಡಾಧಿಕಾರಿ ಸುರೇಶ್ ಮುಂಜಿ ಅವರಿಗೆ ಹೇಳಿದ್ದೇನೆ. ಆ ಜಮೀನ್ ಸರ್ವೇ ಮಾಡಿಸಿ ನಿಜವಾದ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡುತ್ತೇನೆ"

"ಕಳೆದರೆ ಎರಡು ತಿಂಗಳ ಹಿಂದೆ ತಹಶೀಲ್ದಾರ್ ಸುರೇಶ ಮುಂಜೆ ಸಾಹೇಬರಿಗೆ ಮನವಿ ಮಾಡಿ ಸರ್ವೇ ಮಾಡಿಸಿ, ನಮಗೆ ಹಕ್ಕುಪತ್ರ ನೀಡಿರಿ ಅಂತ ತಿಳಿಸಿರಿ ಎಂದರೂ. ಸಾರ್ವಜನಿಕರಿಗೆ ಹಾರಿಕೆ ಉತ್ತರ ಕೊಡುತ್ತಾ.... ಸರ್ವೆ ಕಾರ್ಯವನ್ನು ಮುಂದೂಡುತ್ತಾ ಬರುತ್ತಿರುವುದು ತಹಶೀಲ್ದಾರ್ ಸುರೇಶ್ ಮುಂಜೆ ಅವರ ನಡೆಯು ನಿವಾಸಿಗಳ ಹಾಗೂ ದಲಿತ ಸಮುದಾಯದವರಿಗೆ ಬೇಸರ ತಂದಿದೆ. ಇದೇ ರೀತಿ ಮುಂದುವರೆದರೆ, ನಾವು ಮುಂದೊಂದು ದಿನ ಪ್ರತಿಭಟನೆ ಮಾಡುವ ನಿರ್ಧಾರವನ್ನ ಕೈಗೊಳ್ಳಬೇಕಾಗುತ್ತದೆ"

ಈ ಸಂದರ್ಭದಲ್ಲಿ ಗ್ರಾಮಪಂ ಸದಸ್ಯ ಪ್ರಭು ಕರೋಶಿ, ಮಾಜಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಭಂಡಾರಿ, ಮಾಜಿ ಗ್ರಾಪಂ ಸದಸ್ಯ ರಮೇಶ ಉಳ್ಳಾಗಡ್ಡಿ, ಸಾಗರ ಕುರಬೆಟ್ಟಿ, ಶಿವಾಜಿ ಮೇತ್ರಿ, ಕುಮಾರ ತೆಳಗಡೆ, ಮಹಾಲಿಂಗ ಬಳಿಗಾರ, ಹೈದರ್ ಮುಜಾವರ, ಮಹಾಲಿಂಗ ಜನವಾಡ, ರಾಮಪ್ಪ ಮಾದರ ಇತರರು ಇದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow